ಪುನರಾವರ್ತಿತ ಪ್ರಶ್ನೆಗಳು

ಜನಸೇವಕ ಎಂಬುದು ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸಿ ಅವರ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ನಾಗರಿಕರು ದೂರವಾಣಿ ಸಂಖ್ಯೆ: 080-4455 4455ಗೆ ಕರೆ ಮಾಡಿದಲ್ಲಿ ತರಬೇತಿ ಹೊಂದಿದ ಕರೆ ಕೇಂದ್ರದ ಕಾರ್ಯನಿರ್ವಾಹಕರು ಈ ಸೇವೆಯನ್ನು ಪಡೆಯುವ ಬಗ್ಗೆ ಮಾಹಿತಿ ಒದಗಿಸುತ್ತಾರೆ.

ಈ ಸೇವೆಯನ್ನು ಪಡೆಯಲು ನಾಗರಿಕರು ತಮ್ಮ ಫೋನ್‌ಗಳಲ್ಲಿ ಮೊಬೈಲ್ ಒನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಮಾಡಬಹುದು.

ನಾಗರಿಕರು ಸ್ಲಾಟ್ ಅನ್ನು ಬುಕ್ ಮಾಡಲು ಜಾಲತಾಣಕ್ಕೆ ಭೇಟಿ ಮಾಡಿ. clicking here.

ನಾಗರಿಕರು ತಾವು ಕೋರಿರುವ ಸಂಬಂಧಿತ ಸೇವೆಗೆ ಇಲಾಖೆ ಶುಲ್ಕ ಹಾಗೂ ಸೇವಾ ಶುಲ್ಕದೊಂದಿಗೆ ರೂ.115/-ಗಳನ್ನು ಜನಸೇವಕರು ಸ್ವೀಕರಿಸುತ್ತಾರೆ. ಮುದ್ರಣ ಶುಲ್ಕಗಳು ಅನ್ವಯವಾಗುವಂತೆ

ನಾಗರಿಕರು ಸೇವೆಗಾಗಿ ಸಮಯ ಕಾಯ್ದಿರಿಸಿದಲ್ಲಿ ಅವರ ಮೊಬೈಲ್‌ ಸಂಖ್ಯೆಗೆ ವಿವರಗಳೊಂದಿಗೆ ಒಂದು ಓ.ಟಿ.ಪಿ ಸಂಖ್ಯೆಯನ್ನು ಎಸ್.‌ಎಂ.ಎಸ್‌ ಮೂಲಕ ಕಳುಹಿಸಲಾಗುವುದು. ಜನಸೇವಕ ಸಿಬ್ಬಂದಿಯು ಅರ್ಜಿ ಸ್ವೀಕರಿಸಲು ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಓ.ಟಿ.ಪಿ ಸಂಖ್ಯೆಯನ್ನು ನೀಡಬೇಕು.

ತಮ್ಮ ಮನೆಗೆ ಭೇಟಿ ನೀಡುವ ಜನಸೇವಕ ಸಿಬ್ಬಂದಿಯು ಅಧಿಕೃತ ಸಮವಸ್ತ್ರ ಧರಿಸಿರುತ್ತಾರೆ ಹಾಗೂ ಸರ್ಕಾರದಿಂದ ಒದಗಿಸಲಾದ ಅಧಿಕೃತ ಗುರುತಿನ ಚೀಟಿ ಹೊಂದಿರುತ್ತಾರೆ. ಅಲ್ಲದೆ, ತಾವು ಸೇವೆಗಾಗಿ ಸಮಯ ಕಾಯ್ದಿರಿಸಿದ ಕೂಡಲೇ ತಮ್ಮ ಮೊಬೈಲ್‌ ಸಂಖ್ಯೆಗೆ ಒಂದು ಓ.ಟಿ.ಪಿ ಸಂಖ್ಯೆಯನ್ನು ಕಳುಹಿಸಲಾಗುವುದು. ಈ ಸಂಖ್ಯೆಯನ್ನು ತಾವು ದೃಢಿಕರಣಕ್ಕಾಗಿ ತಮ್ಮ ಮನೆಗೆ ಭೇಟಿ ನೀಡುವ ಜನಸೇವಕ ಸಿಬ್ಬಂದಿಗೆ ಒದಗಿಸುವ ಮೂಲಕ ದೃಢೀಕರಿಸಿಕೊಳ್ಳಬಹುದು.

ಹೌದು. ಯಾವುದೇ ಅನಿರೀಕ್ಷಿತ ಕಾರಣದಿಂದಾಗಿ ನಿಗದಿತ ಸಮಯದ ಒಂದು ಗಂಟೆ ಮುಂಚಿತಾವಾಗಿ ತಾವು ಕಾಯ್ದಿರಿಸಿದ ಸಮಯವನ್ನು ಕರೆ ಕೇಂದ್ರ(080–49203888) ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಬದಲಾಯಿಸಬಹುದು.

ಹೌದು. ಯಾವುದೇ ಅನಿರೀಕ್ಷಿತ ಕಾರಣದಿಂದಾಗಿ ನಿಗದಿತ ಸಮಯದ ಒಂದು ಗಂಟೆ ಮುಂಚಿತಾವಾಗಿ ತಾವು ಕಾಯ್ದಿರಿಸಿದ ಸಮಯವನ್ನು ಕರೆ ಕೇಂದ್ರ (080–49203888) ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರದ್ದುಗೊಳಿಸಬಹುದು.

ಪ್ರಸ್ತುತ 8 ಇಲಾಖೆಗಳ 58 ಸೇವೆಗಳನ್ನು ಜನಸೇವಕ ಯೋಜನೆಯಡಿ ಪಡೆಯಬಹುದು. ಸೇವೆಗಳ ಪೂರ್ಣ ಪಟ್ಟಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

ಒಂದು ಸ್ಲಾಟ್‌ನಲ್ಲಿ ಕೇವಲ ಒಂದು ಸೇವೆಯನ್ನು ಮಾತ್ರ ಪಡೆಯಬಹುದು. ಹೆಚ್ಚಿನ ಸೇವೆಗಳನ್ನು ಪಡೆಯಲು, ನೀವು ಪ್ರತಿ ಸೇವೆಗೆ ಪ್ರತ್ಯೇಕ ಸ್ಲಾಟ್ ಅನ್ನು ಬುಕ್ ಮಾಡಿಕೊಳ್ಳಬೇಕು.

ನಾಗರಿಕರು ಸೇವೆ ಪಡೆಯಲು ಸಮಯ ಕಾಯ್ದಿರಿಸುವ ಸಂದರ್ಭದಲ್ಲಿ ಅಂತಹ ಸೇವೆಗಳನ್ನು ಪಡೆಯಲು ನೀಡಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಜನಸೇವಕರ ಆಗಮನದ ವಿಳಂಬವನ್ನು ವರದಿ ಮಾಡಲು ನೀವು ಕರೆ ಕೇಂದ್ರವನ್ನು (080–49203888) ಸಂಪರ್ಕಿಸಬಹುದು.

ನಗದು ವಿಧಾನ ಮತ್ತು ವಿವಿಧ ಡಿಜಿಟಲ್ ಪಾವತಿ ವಿಧಾನಗಳನ್ನು (UPI, Paytm ಇತ್ಯಾದಿ) ಸಕ್ರಿಯಗೊಳಿಸಲಾಗಿದೆ.

ಜನಸೇವಕ ಸೇವೆಗಳು ವಾರದ ಎಲ್ಲಾ ದಿನಗಳಲ್ಲಿ 8 AM ರಿಂದ -8PM ವರೆಗೆ ಲಭ್ಯವಿರುತ್ತವೆ.

ಜನಸೇವಕ ಸೇವಾ ವಿತರಣೆಯನ್ನು ವಾರದ ಎಲ್ಲಾ ದಿನಗಳಲ್ಲಿ 8 AM ರಿಂದ - 8PM ರವರೆಗೆ ಪಡೆಯಬಹುದು.

ಸ್ಲಾಟ್‌ಗಳನ್ನು ಕಾಲ್ ಸೆಂಟರ್‌ಗೆ ಕರೆ ಮಾಡುವ ಮೂಲಕ ಅಥವಾ ಮೊಬೈಲ್ ಆಪ್ ಮೂಲಕ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. mobile app. or ವೆಬ್‌ಸೈಟ್ website