ಜನಸೇವಕ ಯೋಜನೆಯ ಬಗ್ಗೆ

ಜನಸೇವಕ ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸಿ ಅವರ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ನಾಗರಿಕರು ತಮ್ಮ ಅನುಕೂಲಕರ ದಿನ ಹಾಗೂ ಸಮಯದ ಆಧಾರದಲ್ಲಿ 8AM ರಿಂದ 8PM ನಡುವೆ ಎಲ್ಲಾ ದಿನಗಳಲ್ಲಿ ಸ್ಲಾಟ್ ಬುಕ್ ಮಾಡಬಹುದು.

ನಾಗರಿಕರು ದೂರವಾಣಿ ಸಂಖ್ಯೆ: (080–49203888) ಗೆ ಕರೆ ಮಾಡಿದಲ್ಲಿ ತರಬೇತಿ ಹೊಂದಿದ ಕರೆ ಕೇಂದ್ರದ ಕಾರ್ಯನಿರ್ವಾಹಕರು ಈ ಸೇವೆಯನ್ನು ಪಡೆಯುವ ಬಗ್ಗೆ ಮಾಹಿತಿ ಒದಗಿಸುತ್ತಾರೆ. ನಾಗರಿಕರು ತಮ್ಮ ಜನಸೇವಕ ಕೇಂದ್ರಕ್ಕೆ 080–49203888 ಕರೆ ಮಾಡುವುದರ ಮೂಲಕ ಅಥವಾ ಜಾಲತಾಣ(www.janasevaka.karnataka.gov.in) ವನ್ನು ಸಂಪರ್ಕಿಸುವುದರ ಮೂಲಕ ಅಥವಾ ಮೊಬೈಲ್ ಒನ್ ಅಪ್ಲಿಕೇಶನ್ ಬಳಸಿ ಸ್ಲಾಟ್ ಗಳನ್ನು ಕಾಯ್ದಿರಿಸಬಹುದಾಗಿದೆ

ಜನಸೇವಕ ಪ್ರಾಯೋಗಿಕ ಯೋಜನೆಯು 02.03.2019.ರಂದು ಬೆಂಗಳೂರು ಉತ್ತರ ತಾಲ್ಲೂಕಿನ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 5 ಸೇವೆಗಳೊಂದಿಗೆ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು04.02.2020. ರಂದು ರಾಜಾಜಿನಗರ, ಮಹದೇವಪುರ ಮತ್ತು ಬೊಮ್ಮನಹಳ್ಳಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಈ ಹಂತದಲ್ಲಿ ಈ ಯೋಜನೆಗೆ ಇನ್ನೂ 48 ಸೇವೆಗಳನ್ನು ಸೇರಿಸಲಾಯಿತು. 5 ಹೆಚ್ಚಿನ ಸೇವೆಗಳ ಜೊತೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಜನವರಿ 18, 2021. ರಂದು ಸೇರಿಸಲಾಯಿತು, ಪ್ರಸ್ತುತ ಈಗ ಒಟ್ಟು 80 ಸೇವೆಗಳು ಜನಸೇವಕ ಯೋಜನೆಯಡಿ ಲಭ್ಯವಿದೆ.

ಇಲ್ಲಿಯವರೆಗೂ 2,00,000+,ಕ್ಕೂ ಹೆಚ್ಚು ಅರ್ಜಿಗಳನ್ನು ಜನಸೇವಕ ಯೋಜನೆ ಮೂಲಕ ಸಂಗ್ರಹಿಸಲಾಗಿದೆ.

ಈ ಯೋಜನೆಯ ನಿರೀಕ್ಷಿತ ಪ್ರಯೋಜನೆಗಳು<
  • ಸೇವೆಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಸಮಯವನ್ನು ಉಳಿಸಬಹುದು.
  • ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಥವಾ ನಾಗರಿಕ ಸೇವಾ ಕೇಂದ್ರಗಳಿಗೆ ಪ್ರಯಾಣಿಸುವ ಹಣವನ್ನು ಉಳಿಸಬಹುದು
  • ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
  • ಜನಸೇವಕ ಭೇಟಿ ಮಾಡಲು ನಾಗರಿಕರು ತಮ್ಮ ಅನುಕೂಲಕರ ದಿನ ಹಾಗೂ ಸಮಯದ ಆಧಾರದಲ್ಲಿ 8AM ರಿಂದ 8PM ನಡುವೆ ಎಲ್ಲಾ ದಿನಗಳಲ್ಲಿ ಸ್ಲಾಟ್ ಬುಕ್ ಮಾಡಬಹುದು.
  • ಹಿರಿಯ ನಾಗರಿಕರು ಮತ್ತು ವಿಕಲಚೇತನರು ಮನೆ ಬಾಗಿಲಲ್ಲಿ ಜನಸೇವಕ ಸೇವೆಗಳನ್ನು ಪಡೆಯಲು ಸಹಾಯವಾಗುತ್ತದೆ.